ಅಖಂಡ ಕರ್ನಾಟಕದಿಂದ ಭವ್ಯ ಭಾರತದೆಡೆಗೆ ದೇಸಿಸ್ಕಿಲ್ಸ್

ಗ್ರಾಮೋದ್ಧಾರದಿಂದ ಪರಿಕಲ್ಪನೆಯ ಟಿಸಿಲು ಈಗ ಪಟ್ಟಣ ಹಾಗು ನಗರ ಪ್ರದೇಶಗಳತ್ತ ಚಾಚುತ ನಡೆಯುತ್ತಿದೆ ಇದು ಒಂದು ಒಳ್ಳೆಯ ಬೆಳವಣಿಗೆ. ಗ್ರಾಮದ ಕಟ್ಟಕಡೆಯ ಮನೆಗೆ ದೇಶದ ಅತ್ಯುನ್ನತ ಸೇವೆಗಳನ್ನು ಮುಟ್ಟಿಸಲು ಕನಸು ಕಂಡ ನಮ್ಮ ಸಂಸ್ಥೆಯು ಅದನ್ನು ಸಾಕಾರಗೊಳಿಸಲು ಗ್ರಾಮ ಹಾಗು ನಗರ ಪ್ರದೇಶಗಳ ವ್ಯಕ್ತಿಗಳಿಗೂ ಸೇವೆಗಳನ್ನು ಮುಟ್ಟಿಸಲು ದಿಟ್ಟಹೆಜ್ಜೆ ಇಟ್ಟಿದೆ. ಇದಕ್ಕೆ ಕರ್ನಾಟಕದಾದ್ಯಂತ ತುಂಬಾ ದೊಡ್ಡಮಟ್ಟದ ಕೂಗು ಬಂದಿರುವುದ ರಿಂದ ಇದಕ್ಕೆ ಸಂಸ್ಥೆಯು ಪೂರಕವಾಗಿ. ದೇಸಿಸ್ಕಿಲ್ಸ್ ಗ್ರಾಮೋದ್ಧಾರ ಕೇಂದ್ರದ ಎಲ್ಲಾ
ಸೇವೆಗಳನ್ನು ಪಟ್ಟಣ ಹಾಗು ನಗರ ಪ್ರದೇಶಗಳಿಗೂ ವಿಸ್ತರಿಸಲು ಬ್ಯಾಂಕ್ ಹಾಗು ಇನ್ನಿತರ ಎಲ್ಲಾ ಇಲಾಖೆಯಿಂದ ಒಳ್ಳೆಯ ಸ್ಪಂದನೆ ಇರುವುದರಿಂದ ಇಂದಿನಿಂದಲೇ ಜಾರಿಗೆ ಬರುವಂತೆ  ಸಂಸ್ಥೆಯು ಎಲ್ಲಾ ಜಿಲ್ಲಾ ಹಾಗು ತಾಲ್ಲೂಕು ಪ್ರತಿನಿಧಿಗಳಿಗೆ ಈ ಸಂತೋಷದ ವಿಷಯವನ್ನು ಮುಟ್ಟಿಸಲು ತುಂಬಾ ಉತ್ಸುಕವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಇನ್ನು ತಾಲ್ಲೂಕು ಹಾಗು ಜಿಲ್ಲಾ ಮಟ್ಟದ ಸಮನ್ವಯಾಧಿಕಾರಿಗಳು ಎಲ್ಲಾ ಸೇವೆಗಳನ್ನು ಆಯಾಯ ಪ್ರದೇಶ ಜನರಿಗೆ ತಲುಪಿಸಲು ಹಸಿರು ನಿಶಾನೆ ತೋರಬಹುದೆಂದು ಸಂಸ್ಥೆಯು ರಹದಾರಿ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ದೇಸಿಸ್ಕಿಲ್ಸ್ನಿಂದ ಗ್ರಾಮೋದ್ಧಾರ ಗ್ರಾಮೋದ್ಧಾರದಿಂದ
ದೇಶೋದ್ಧಾರ ಹೇಳಿಕೆಗೆ ನಮ್ಮ ಸಂಸ್ಥೆಯು ಕಂಕಣಬದ್ದವಾಗಿದೆ ಎಂದು ತಿಳಿಸಲು ನಾವು ಹೆಮ್ಮೆಯನ್ನು ವ್ಯಕ್ತಪಡಿಸುತ್ತೇವೆ.Leave a Reply