ಇ-ಆಡಳಿತ ನಿರ್ದೇಶನಾಲಯದೊಂದಿಗೆ ಬಲವಾದ ಮಾತು-ಕಥೆ

ದಿನಾಂಕ ೨೬-೧೨-೨೦೧೮ ರಂದು ಇ-ಆಡಳಿತ ಸೇವೆಗಳನ್ನು ಗ್ರಾಮಕ್ಕೆ ತಲುಪಿಸುವ ಜವಾಬ್ದಾರಿಯನ್ನು ಕಾನೂನು ಬದ್ಧತೆ ಮತ್ತು ದಾಖಲಾತಿಗಳ ಸಹಾಯಕ ವ್ಯವಸ್ಥಾಪಕರಾದ ರೇಣುಕಾ ಪ್ರಸಾದ್ ಪುಟ್ಟರೇವಣ್ಣ ಮತ್ತು ದಾವಣಗೆರೆ ಮತ್ತು ಕಲಬುರ್ಗಿ ವಲಯ ಸಮನ್ವಯಾಧಿಕಾರಿಯಾದ ರಾಮಣ್ಣನವರ ನೇತೃತ್ವವದಲ್ಲಿ, ಕಸ್ತೂರಬಾ ರಸ್ತೆಯಲ್ಲಿರುವ ಇ-ಆಡಳಿತ ನಿರ್ದೇಶನಾಲಯ ಕಚೇರಿಗೆ ಭೇಟಿ ನೀಡಿದ್ದರು. ನಿರ್ದೇಶನಾಲಯದ ತಾಂತ್ರಿಕ ಮುಖ್ಯಸ್ಥರನ್ನು ಒಳಗೊಂಡಂತೆ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು. ಇಆಅS ಸೇವೆಗಳನ್ನು ನೀಡುವುದಕ್ಕೆ ಬೇಕಾದ
ಮಾಹಿತಿ ಜ್ಞಾನವನ್ನು ನೀಡಲು ಮುಂದಾದರು, ಆಡಳಿತ ಸೇವೆಯ ಸರ್ವರ್‌ಗಳು ಹೇಗೆ ಕಾರ್ಯನಿರ್ವಯಿಸುತ್ತವೆ ನಾವು ಎಷ್ಟು ಜಾಗರುಕಂತೆಯಿಂದ ಇರಬೇಕು ಎನ್ನುವುದರ ಬಗ್ಗೆ ಚರ್ಚಿಸಿದರು, ಪೇಮೆಂಟ್ ಗೇಟ್‌ವೇ ಬಗ್ಗೆ ನಮ್ಮ ಜವಾಬ್ದಾರಿಗಳು ಎಷ್ಟಿರುತ್ತವೆಂದ್ದು ತಿಳಿಸಿದರು. ಮೂಲವಾಗಿ ಕಂಪ್ಯೂಟರ್‌ಗಳು ಆಡಳಿತ ಸೇವೆಗಳನ್ನು ನೀಡಲು ಹೇಗಿರ ಬೇಕೆಂದು ತಿಳಿಸಿದರು. ಸರ್ಕಾರದ ಸೇವೆಗಳ ದತ್ತಾಂಶದ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿ ಇರಬೇಕೆಂದು ವಿವರಿಸಿದರು. ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರದ ತಂತ್ರಜ್ಞಾನ ತಂಡವಿರುತ್ತದೆ ಏನೇ ಸಮಸ್ಯೆಯಾದರೂ ಅವರನ್ನು ಸಂಪರ್ಕಿಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವರು ಎಂದು ಭರವಸೆಯನ್ನು ನೀಡಿದರು. ಸುಮಾರು 90ನಿಮಿಷಗಳ ನಿರ್ದೇಶನಾಲಯದ ಸಭೆಯಲ್ಲಿ ನಮ್ಮೊಂದಿಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ಎಂದು ಸಹಾಯಕ ವ್ಯವಸ್ಥಾಪಕರು ತಿಳಿಸಿದರು. ಜಿಲ್ಲಾಸಮನ್ವಯಾಧಿಕಾರಿಗಳಿಗೆ ಮಾಹಿತಿಯನ್ನು ಸಂಪೂರ್ಣ ತಿಳಿಸಲು ಪ್ರಧಾನ ಕಾರ್ಯಾಲಯದಲ್ಲಿ ಇ-ಆಡಳಿತ ಸೇವೆಗಳ ಡೆಮೋಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದಷ್ಟು ಬೇಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.Leave a Reply