ಮುಂಡಗೋಡ ಗ್ರಾಮಪಂಚಾಯಿತಿಯ ಹಣಕಾಸಿನ ವ್ಯವಹಾರದ ಜವಾಬ್ದಾರಿಯನ್ನು ಹೊತ್ತು ಜನರಿಗೆ ಸಂಪೂರ್ಣ ಸೇವೆ ಸಲ್ಲಿಸಲು ಮುಂದಾದ ನಮ್ಮ ಗ್ರಾಮ ಪಂಚಾಯಿತಿ ಸಮನ್ವಯಾಧಿಕಾರಿಗಳು

ಪ್ರಧಾನ ಕಾರ್ಯಲಯದ ಆಪ್ತವಲಯ, ದೂರವಾಣಿ ಯಲ್ಲಿ ಮುಂಡಗೋಡು ಗ್ರಾಮಪಂಚಾಯತಿಯ ಸಮನ್ವಯಾಧಿಕಾರಿಯಾದ ಬಮ್ಮ.ಟಿ.ತೋರವತ, ಅವರೊಂದಿಗೆ ಸಂದರ್ಶಿಸಿತ್ತು. ಆ ಕರೆಯಲ್ಲಿ ಪ್ರತಿಕ್ರಿಯಿಸಿ ಮಾತನಾಡಿದ ಅವರು ಆಗಸ್ಟ್ ನಲ್ಲಿ ದೇಸಿಸ್ಕಿಲ್ಸ್ ಬಗ್ಗೆ ಮಾಹಿತಿ ತಿಳಿದು ಅವರ ಹೊಸ ಪ್ರಯತ್ನದ ಬಗ್ಗೆ ಆಲೋಚಿಸುತ್ತಿದ್ದೆ.ಆ ಸಮಯದಲ್ಲಿ ಜಿಲ್ಲಾಸಮನ್ವ ಯಾಧಿಕಾರಿಗಳಾದ ಸಚಿನ್‌ರವರ ದೂರವಾಣಿ ಸಂಖ್ಯೆ ಪಡೆದು ಅವರನ್ನು ಸಂಪರ್ಕಿಸಿದೆ. ಅವರು ಕೂಡ ಎಲ್ಲಾ ಮಾಹಿತಿಯನ್ನು ಕೊಟ್ಟರು. ಕೇಂದ್ರಗಳನ್ನು ಪ್ರಾರಂಭಿಸುವ ಸಂಧರ್ಭದಲ್ಲಿ ನಮ್ಮ ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ತುಂಬಾ ಬಲವಾಗಿ ನಿಂತರು ದಾಖಲಾತಿಗಳನ್ನು ಖುದ್ದು ಅವರೇ ನಿಂತು ಮಾಡಿಸುತ್ತಿದ್ದರು. ಈ ಮೂರು ತಿಂಗಳ ಪ್ರಯತ್ನ, ಶ್ರಮ, ಶ್ರಧ್ಧೆ ಈ ದಿನ ಬರಲು ಕಾರಣವಾಗಿದೆ. ಹಿಂದೆ ಜನ ಸಾಕಷ್ಡು ಮಾತನಾಡುತ್ತಿದ್ದರು.ಈ ಕೆಲಸಗಳೆಲ್ಲ ನಿಜವಾಗಿಯೂ ಅಸಾದ್ಯವಾದದ್ದು, ಬೇಡ ಎಂದು ಮನಸ್ಸಿಗೆ ಹಿಂದೆಟು ಹಾಕಲು ಪ್ರೇರೆಪಿಸುತ್ತಿದ್ದರು. ಬಹಳ ನೋವು ಕೂಡ ಆಗುತ್ತಿತ್ತು. ಆ ಸಂಧರ್ಭದಲ್ಲಿ ಸಚಿನ್ ಸಾರ್ ಅವರೊಂದಿಗೆ ಮಾತನಾಡುತ್ತಿದ್ದೆ. ಇರುವ ಸೇವೆಗಳನ್ನು ಬಳಸಿ ಹೊಸದನ್ನು ಮಾಡಲು ಪ್ರೇರೆಪಿಸುತ್ತಿದ್ದರು. ತುಂಬಾ ಬಲವಾಗಿ ನಮ್ಮೊಂದಿಗೆ ಆ ಸಂದರ್ಭದಲ್ಲಿ ನಿಂತರು ಈ ದಿನ ಬರಲು ಕಾರಣರಾದರು. ಮನೆಯವರೆಲ್ಲಾರೂ ಖುಷಿಪಟ್ಟು ಈ ದಿನವನ್ನು ಸಂಭ್ರಮಿಸುತ್ತಿದ್ದಾರೆ. ಗ್ರಾಮದ ಜನ ಇವತ್ತಿನಿಂದ ನಮ್ಮನ್ನು ನೋಡಲು ಮತ್ತು ಬ್ಯಾಂಕಿಗ್ ಸೇವೆಯನ್ನು ಪಡೆಯಲು ಮುಂದಾಗುತ್ತಿದ್ದಾರೆ. ಎಲ್ಲಾ ಜಿಲ್ಲೆಯ ಸಮನ್ವಾಯಧಿಕಾರಿಗಳು ಕರೆ ಮಾಡಿ ಆಭಿನಂದನೆ ತಿಳಿಸುತ್ತಿದ್ದಾರೆ. ಮಂಡ್ಯದ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ಸಮನ್ವಾಯಾಧಿಕಾರಿ ಆಭಿಷೇಕ್ ಕೂಡ ಕರೆ ಮಾಡಿದ್ದರು.(೬೦,೦೦೦)ಕ್ಕೂ ಹೆಚ್ಚು ವಹಿವಾಟನ್ನು ಸ್ಟೋರ್ ಕಿಂಗ್‌ನ ಮುಖಾಂತರ ಮಾಡಿದವರು. ಹೇಗೆ ಸ್ಟೋರ್ ಕಿಂಗ್‌ನ ಸೇವೆಗಳನ್ನು ಜನರಿಗೆ ತಲುಪಿಸಬೇಕೆಂದು ನನಗೆ ತಿಳಿಸಿಕೊಟ್ಟರು. ಅವರು ಕೂಡ ಬ್ಯಾಂಕಿಗ್ ವಿಚಾರಗಳನ್ನು ನಮ್ಮಿಂದ ತಿಳಿದುಕೊಂಡರು. SBI ಮೈಕ್ರೋ ಬ್ರಾಂಚ್ ಅನ್ನು ಮುಂಡಗೋಡದಲ್ಲಿ ಪ್ರಾರಂಭಿಸಲು ಜೊತೆನಿಂತ ಮುಂಡಗೋಡ ಬ್ಯಾಂಕ್ ಸಿಬ್ಬಂದಿಗಳಿಗೆ, ಪ್ರಧಾನ ಕಾರ್ಯಲಯದಲ್ಲಿ ಸೇವೆಸಲ್ಲಿಸುತ್ತಿರುವ ರವಿ ಕುಮಾರ್‌ರವರಿಗೆ, ನೆಚ್ಚಿನ ಜಿಲ್ಲಾ ಸಮನ್ವಯಾಧಿಕಾರಿ ಸಚಿನ್‌ರವರಿಗೆ ಮತ್ತು ವಿಶೇಷವಾಗಿ ವಲಯಾಧಿಕಾರಿಯದ ರಾಮಣ್ಣನವರಿಗೆ ಮತ್ತು ಪ್ರೀತಿಯ ಪ್ರಧಾನ ಕಾರ್ಯಾಲಯಕ್ಕೆ ಈ ಸಂದರ್ಭದಲ್ಲಿ ಕೃತಜ್ಞಾತೆಗಳನ್ನು ತಿಳಿಸುತ್ತೇನೆ. ಎಂದು ತಮ್ಮ ಮನದಾಳದ ಮಾತನ್ನು ನಮ್ಮೊಂದಿಗೆ ಹಂಚಿಕೊಂಡರು.Leave a Reply