ಮಾಹಿತಿ ತಂತ್ರಜ್ಞಾನದ ಸರ್ವೋಚ್ಛ ಭದ್ರತೆಯೊಂದಿಗೆ ದೇಸಿ ಸ್ಕಿಲ್ಸ್ ಸಂಸ್ಥೆಯ ಸೇವೆಗಳು ಸಾರ್ವಕಾಲಿಕ ಮುಂಚೂಣಿಯಲ್ಲಿ!

ದೇಸಿ ಸ್ಕಿಲ್ಸ್ ತಮಗೆಲ್ಲರಿಗೂ ತಿಳಿದಿರುವಂತೆ ಸಮಾಜಸೇವೆಯ ಕಾಯಕದ ಪ್ರಗತಿಯ ಹಾದಿಯಲ್ಲಿದೆ! ಈ ಎಲ್ಲಾ ಸೇವೆಗಳನ್ನು ನೀಡಲು ಅಂತರ್ಜಾಲದ ಅವಶ್ಯಕತೆ ಕಡ್ಡಾಯ ಹಾಗೂ ಅನಿವಾರ್ಯವೂ ಹೌದು. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಅಂತರ್ಜಾಲದ ಮೂಲಕ ಹಲವಾರು ಸರ್ಕಾರಿ/ ಅರೆ ಸರ್ಕಾರಿ ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ನೀಡುವುದು ಇಂದಿನ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಯುಗದಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ಆದರೆ ದೇಸಿ ಸ್ಕಿಲ್ಸ್ ಸಾರ್ವಜನಿಕರಿಗೆ ಈ ಎಲ್ಲಾ ಸೇವೆಗಳನ್ನು ಭೀತಿಮುಕ್ತ ಹಾಗೂ ಪಾರದರ್ಶಕವಾಗಿ ನೀಡಲು ದಿಟ್ಟಹೆಜ್ಜೆಯನ್ನಿಟ್ಟು ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ನ: ಭೂತೋ ನ: ಭವಿಷ್ಯತಿ ಎಂಬ ನಾಣ್ಣುಡಿಯಂತೆ ಹಿಂದೆಂದೂ ಕಂಡರಿಯದಂತಹ ಅತ್ಯುನ್ನತ ಅಂತರ್ಜಾಲ ಭದ್ರತಾ ವ್ಯವಸ್ಥೆಯೊಡನೆ ಡಿಜಿಟಲ್ ಜಗತ್ತಿನ ನೈಜ ಅನುಭವವನ್ನು “ಗ್ರಾಮೋದ್ಧಾರ ಕೇಂದ್ರ”ಗಳ ಮೂಲಕ ಒದಗಿಸುತ್ತಿದೆ. ಹೇಗೆಂದು ಕ್ಷಣಕಾಲ ಯೋಚಿಸುತ್ತಿರುವಿರಾ?

ಈ ಮೇಲಿನ ಎಲ್ಲಾ ವಿಚಾರಗಳನ್ನು ಮೆಲುಕು ಹಾಕುತ್ತಿರುವಾಗ ಸಂಸ್ಥೆಯ ಪ್ರಮುಖ ಆಧಾರ ಸ್ಥಂಭಗಳು ಹಾಗೂ ತಂತ್ರಜ್ಞಾನದ ಸಾಕಷ್ಟು ಏಳು-ಬೀಳುಗಳ ನಡುವೆ ನಲುಗಿ ಅದರ ಸಾಧಕ-ಬಾಧಕಗಳನ್ನು ಪ್ರತ್ಯಕ್ಷವಾಗಿ ಅರಿತಿರುವ ಶ್ರೀಮತಿ ಕಾವ್ಯ ವೇಣು ಮತ್ತು ಶ್ರೀಯುತ ಕೌಶಿಕ್ ಎಸ್. ಎಸ್. ರವರ ಸುಮಾರು ಪ್ರಯೋಗ-ಪ್ರಯತ್ನಗಳ ನಡುವೆ ಅವರಿಗೆ ಸೂಕ್ತವೆನಿಸಿದ್ದು ಭಾರತದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪರಿಣತ ಹಾಗೂ ದಿಗ್ಗಜರೆ ನಿಸಿರುವ “ಟಾಟಾ” ಸಂಸ್ಥೆಯ ಅಂತರ್ಜಾಲ ಸೇವೆಗಳು. ಅಂತಿಮವಾಗಿ ಇದನ್ನು ಕಾರ್ಯರೂಪಕ್ಕೆ ತಂದು ಸಂಸ್ಥೆಯ ಸೇವೆಗಳನ್ನು ಇದರ ಮೂಲಕ ನೀಡುವಲ್ಲಿ ಈರ್ವರೂ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಇದರ ಪ್ರಮುಖ ಉಪಯೋಗಗಳೆಂದರೆ ಇದು ಒಂದು “ಮೀಸಲು ಭೌತಿಕ ಸರ್ವರ್” ಆಗಿದ್ದು ಟಾಟಾ ಸಂಸ್ಥೆಯ ಅತಿದೊಡ್ಡ ಸಂಪರ್ಕ ಜಾಲವಾಗಿ ಪರಿಣಮಿಸಿದೆ. ಇಂದಿನ ಅತ್ಯುನ್ನತ ಹಾಗೂ ಉನ್ನತೀಕರಿಸಿದ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡಿದ್ದು ರಾಜ್ಯದ ಎಲ್ಲಾ ೬೦೨೪ ಗ್ರಾಮೋದ್ಧಾರ ಕೇಂದ್ರಗಳನ್ನು ಒಂದೇ ಸೂರಿನಡಿಯಲ್ಲಿ ಸಂಪರ್ಕಿಸುವ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಫೈರ್‌ವಾಲ್ ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಂಡಿದ್ದು ಎಲ್ಲಾ ರೀತಿಯ ದುರ್ಬಳಕೆ ಹಾಗೂ ಇತರೆ ಹಾನಿಕಾರಕ ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಿದೆ. ಇದಲ್ಲದೆ ನಮ್ಮ ಗ್ರಾಮೋದ್ದಾರ ಕೇಂದ್ರಗಳಲ್ಲಿ ನೀಡಲಾಗುವ ಇ-ಆಡಳಿತ ಇಲಾಖೆಗೆ ಸಂಬಂಧಿಸಿದ ಹಲವಾರು ಸರ್ಕಾರಿ, ಬ್ಯಾಂಕಿಂಗ್ ಸೇವೆಗಳು ಮತ್ತು ಅದರ ದತ್ತಾಂಶಗಳು ಅತ್ಯಂತ ಅಮೂಲ್ಯವಾಗಿರುವುದರಿಂದ ಈ ವ್ಯವಸ್ಥೆಯ ಮೂಲಕ ಇದನ್ನು ಸಂಸ್ಥೆಯು ಅತ್ಯಂತ ಜಾಗರೂಕವಾಗಿ ಹಾಗೂ ನಿರ್ಭೀತಿಯಿಂದ ನೀಡಬಹುದಾಗಿದೆ. ಇದಷ್ಟೇ ಏಕೆ? ಯಾವುದೇ ಬಫರಿಂಗ್, ಸರ್ವರ್ ಸಮಸ್ಯೆಗಳಿಂದ ಮುಕ್ತವಾಗಿರುವುದಲ್ಲದೆ. ಇದರ ಮೂಲಕ ಒನ್-ಟು-ಒನ್ ಅಥವಾ ಗುಂಪಿನಲ್ಲಿ ಯಾವುದೇ ರೀತಿಯ ಆಡಿಯೋ ಹಾಗೂ ವಿಡಿಯೋ ಚಾಟ್‌ಗಳನ್ನು ಮಾಡಬಹುದಾಗಿರುತ್ತದೆ. ಮುಂದುವರೆದಂತೆ, ಹಾಟ್‌ಲೈನ್ ವ್ಯವಸ್ಥೆಯಲ್ಲಿ ರಾಜ್ಯದಾದ್ಯಂತ ಯಾವುದೇ ಗ್ರಾಮೋದ್ಧಾರ ಕೇಂದ್ರಗಳಿಂದ ನೇರವಾಗಿ ಕೇಂದ್ರ ಕಚೇರಿಗೆ ಕೇವಲ ಒಂದು ನಿಗದಿತ ಸಂಖ್ಯೆಯನ್ನು ಡಯಲ್ ಮಾಡುವುದರೊಂದಿಗೆ ಕೇಂದ್ರ ಕಚೇರಿಯ ಸಂಬಂಧಪಟ್ಟ ಇಲಾಖೆಯ ಸಂಪರ್ಕವನ್ನು ಹೊಂದುವ ವ್ಯವಸ್ಥೆಯನ್ನೂ ಕೂಡಾ ಇದರಲ್ಲಿ ಅಳವಡಿಸಲಾಗಿದೆ. ಇದು ಸಂಸ್ಥೆಯ ನಿಗದಿತ ಕೇಂದ್ರಗಳಲ್ಲದೆ ಬೇರೆ ಎಲ್ಲಿಯೂ ಸಹ ಕಾರ್ಯ ನಿರ್ವಹಿಸುವುದಿಲ್ಲ ಹಾಗೂ ಇತಿಹಾಸದಲ್ಲಿಯೇ ಕೆಲವು ಕಂಪನಿಗಳನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಈ ರೀತಿಯ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲವಾದ್ದರಿಂದ ದೇಸಿ ಸ್ಕಿಲ್ಸ್ ಈ ವಿಚಾರದಲ್ಲಿ ಮೊಟ್ಟ ಮೊದಲ ಸಾಲಿನಲ್ಲಿ ನಿಂತಿದೆ ಎಂದರೆ ಅತಿಶಯೋಕ್ತಿಯಲ್ಲ. ಇದರ ವೈಶಿಷ್ಟ್ಯತೆಯನ್ನು ಕುರಿತು ಮಾತನಾಡಿದ “ಟಾಟಾ” ಸಂಸ್ಥೆಯ ಸಂಪರ್ಕಜಾಲ
ಮುಖ್ಯಸ್ಥರಾದ ಶ್ರೀ. ಸಂತೋಷ್ ನಾಯಕ್‌ರವರು ದೇಸಿಸ್ಕಿಲ್ಸ್ ನ ಸೇವೆಗಳ ಬಗ್ಗೆ ಅತೀವ ಹರ್ಷ ಹಾಗೂ ಹೆಮ್ಮೆಯನ್ನು ವ್ಯಕ್ತಪಡಿಸಿ ನಾವು ಈ ಸಂಸ್ಥೆಗೆ ನಮ್ಮ ಸೇವೆಯನ್ನು ನೀಡುತ್ತಿರುವುದು ನಮಗೂ ಹೆಮ್ಮೆಯ ವಿಚಾರವಾಗಿದೆ ಹಾಗೂ ಗ್ರಾಮೀಣ ಪ್ರದೇಶದ ಜನರು ಇದರ ಸೇವೆಗಳನ್ನು ಪಡೆದುಕೊಂಡು ತಮ್ಮ ಬವಣೆಯಯನ್ನು ನೀಗಿಸಿಕೊಳ್ಳಬೇಕು ಎಂದು ತಿಳಿಸಿದರು.Leave a Reply