ರಾಜ್ಯ, ರಾಜಧಾನಿ, ನಗರಗಳಲ್ಲಿ, ದೊರಕುವ ಸಕಲವಸ್ತುಗಳನ್ನು ಗ್ರಾಮಕ್ಕೆ ತಲುಪಿಸುವ ದಿಟ್ಟಗುರಿಯ ಮಹತ್ತರ ಹೆಜ್ಜೆ!

ರಾಜಧಾನಿಗಳಲ್ಲಿ ಮತ್ತು ಗ್ರಾಮಗಳಲ್ಲಿ ದೊರಕುವ ಎಲ್ಲಾ ವಸ್ತುಗಳನ್ನು ಗ್ರಾಮಕ್ಕೆ ತಲುಪಿಸುವ ಬಲವಾದ ಹೆಜ್ಜೆಯನ್ನು ಇಡಲು ದೇಸಿ ಸ್ಕಿಲ್ಸ್ ಗ್ರಾಮೋದ್ಧಾರ ಕೇಂದ್ರ ಸಿದ್ಧವಾಗಿದೆ. ಇದರೊಂದಿಗೆ ಪ್ರತಿ ಗ್ರಾಮಗಳನ್ನು ನಗರ ಪ್ರದೇಶ ಮತ್ತು ರಾಜಧಾನಿಯೊಂದಿಗೆ ಬಲವಾಗಿ ಬೆಸೆಯುವಂತ ಮಹತ್ತರ ಪ್ರಯತ್ನ ಇದಾಗಿದೆ. ದೊಡ್ಡ-ದೊಡ್ಡ ಸಂಸ್ಥೆಗಳು ಕೂಡ ಗ್ರಾಮಗಳನ್ನು ತಲುಪಲು ಹೋರಾಡುತ್ತಿವೆ. ಇದರಿಂದ ನಗರಳಲ್ಲೂ ಮತ್ತು ಗ್ರಾಮಗಳಲ್ಲೂ ಒಂದೇ ಪದಾರ್ಥಕ್ಕೆ ನೀಡುವ ಬೆಲೆ ಸಾಕಷ್ಟು ವ್ಯತ್ಯಾಸವನ್ನು ಮೂಡಿಸುತ್ತಿದೆ. ಈ ತರಹ ಅನೇಕ ಸಮಸ್ಯೆಗಳಿಗೆ ಮೂಲ ಪರಿಹಾರವನ್ನು ದೇಸಿ ಸ್ಕಿಲ್ಸ್ ಸಂಶೋಧನಾ ತಂಡ ಹೊಸ ಕ್ರಾಂತಿಯನ್ನು ಮಾಡುವರೀತಿಯಲ್ಲಿ ಹುಡುಕುತ್ತಿದೆ.
ಮೂಲಭೂತವಾಗಿ ಬೇಕಾಗಿರುವ ಎಲ್ಲಾ ತರಹದ ವಸ್ತುಗಳು ಅಂದರೆ ಇಲೆಕ್ಟ್ರಾನಿಕ್ ಉಪಕರಣಗಳು, FMCG ವಸ್ತುಗಳು, ಆಹಾರ ಪದಾರ್ಥ, ವಿದ್ಯಾಭ್ಯಾಸಕ್ಕೆ ಬೇಕಾದ ಸಲಕರಣೆಗಳು, ರೈತರಿಗೆ ಬೇಕಾಗುವ ವಸ್ತುಗಳು, ಹೀಗೆ ಎಲ್ಲಾ ತರಹದ ವಸ್ತುಗಳನ್ನು ತಯಾರಕರಿಂದ ನೇರವಾಗಿ ಗ್ರಾಮದ ಜನತೆಗೆ ಮುಟ್ಟಿಸುವ ಪ್ರಯತ್ನ. ಪ್ರತಿ ವಸ್ತುಗಳ ಮೇಲೆಯಾಗುತ್ತಿರುವ ಹಣದುಬ್ಬರವನ್ನು ಬಹಳವಾಗಿ ಚೇತರಿಸ ಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ವೆರ್‌ಹೌಸ್‌ಗಳನ್ನೂ ಸ್ಥಾಪಿಸಲು ಪ್ರಧಾನಕಾರ್ಯಾಲಯ ಸಿದ್ಧವಾಗುತ್ತಿದೆ. ರಾಜಧಾನಿಯಲ್ಲಿ ಲಭ್ಯವಿರುವ ಎಲ್ಲಾ ವಸ್ತುಗಳನ್ನು ಗ್ರಾಮಗಳಲ್ಲಿಯೂ ಸಿಗುವ ಹಾಗೆ ಮಾಡುವ ಸಂಕಲ್ಪವನ್ನು ದೇಸಿಸ್ಕಿಲ್ಸ್ ತಂಡ ತೆಗೆದುಕೊಂಡಿದೆ. ಆರ್ಥಿಕ ಕ್ರಾಂತಿಯ ಮೊದಲ ಹೆಜ್ಜೆಗೆ ಸಿದ್ಧವಾಗಿದೆ ನಮ್ಮ ಗ್ರಾಮೋದ್ಧಾರ ಕೇಂದ್ರಗಳು. ಜಿಲ್ಲಾ ಮತ್ತು ತಾಲ್ಲೂಕ ಸಮನ್ವಯಾಧಿಕಾರಿಗಳು
ಈ ಕಾರ್ಯವನ್ನು ಸಾಧಿಸಲು ಮುನ್ನುಗುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ೧೦೦ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ. ದೇಶಕಟ್ಟುವ ಕಾರ್ಯದಲ್ಲಿ ಮೊದಲಾಗುತ್ತಿದ್ದಾರೆ.Leave a Reply