ದೇಸಿ ಸ್ಕಿಲ್ಸ್ ಮಾದರಿ ಜಿಲ್ಲೆಗಳ ಪಟ್ಟಿಗೆ ಅಧಿಕೃತ ಸೇರ್ಪಡೆಯಾದ “ರಾಮನಗರ ಜಿಲ್ಲೆ”

ದೇಸಿ ಸ್ಕಿಲ್ಸ್ ತಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಪ್ರಮುಖವಾಗಿ ಗ್ರಾಮೀಣ ನಾಗರೀಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಗುಣಮಟ್ಟವನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿರುವುದು ತಮಗೆಲ್ಲರಿಗೂ ತಿಳಿದ ವಿಚಾರವಾಗಿರುತ್ತದೆ. ಇದು ದೇಶದ ಬೆಳವಣಿಗೆ ಹಾಗೂ ಆರ್ಥಿಕತೆಯನ್ನು ಬೇರುಮಟ್ಟದಿಂದ ಪುಷ್ಠಿಕರಿಸುವುದಷ್ಟೇ ಅಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ಉದ್ಯೋಗಾಕಾಂಕ್ಷಿಗಳಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದೂ ಸೇರಿದಂತೆ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿದೆ. ಇದಕ್ಕಾಗಿ ಈಗಾಗಲೇ ರಾಜ್ಯದಾದ್ಯಂತ “ಗ್ರಾಮೋದ್ಧಾರ ಕೇಂದ್ರ”ಗಳೆಂಬ ಪರಿಕಲ್ಪನೆಯ ಅಡಿಯಲ್ಲಿ ರಾಜ್ಯದ ಉದ್ದಗಲಕ್ಕೂ ೩೦ ಜಿಲ್ಲೆಗಳು, ೧೭೬ ತಾಲ್ಲೂಕುಗಳು ಹಾಗೂ ಸುಮಾರು ೬೦೨೪ ಗ್ರಾಮಪಂಚಾಯಿತಿಗಳಲ್ಲಿಯೂ ಪ್ರಾರಂಭಿಸುವ ಕಾರ್ಯವನ್ನು ಕೈಗೊಂಡಿದ್ದು, ಈಗಾಗಲೇ ಕಳೆದ ವಿಜಯದಶಮಿಯ ಶುಭದಿನದಂದು ಸುಮಾರು ೧೫ ಜಿಲ್ಲೆಗಳ ಪೈಕಿ ೧೭೨ ಗ್ರಾಮೋದ್ಧಾರ ಕೇಂದ್ರಗಳನ್ನು ಶುಭಾರಂಭ ಮಾಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಹಲವು ಸೇವೆಗಳು, ಬ್ಯಾಂಕಿಂಗ್ ಹಾಗೂ ಇನ್ನಿತರೆ ಅತ್ಯಮೂಲ್ಯ ಸೇವೆಗಳನ್ನು ಈ ಕೇಂದ್ರಗಳ ಮೂಲಕ ಗ್ರಾಮೀಣ ಜನರಿಗೆ ನೀಡಲಾಗುತ್ತಿದೆ.

ಈ ಪರಿಕಲ್ಪನೆಯಡಿಯಲ್ಲಿ ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮಂಡ್ಯ, ಉತ್ತರಕನ್ನಡ, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳು ಕಾರ್ಯೋನ್ಮುಖವಾಗಿವೆ. ಈ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಸಮನ್ವಯಾಧಿಕಾರಿಯಾದ ಶ್ರೀಯುತ ಮಂಜುನಾಥ್.ಟಿ ರವರೂ ಸಹ ಸ್ವಯಂಪ್ರೇರಿತರಾಗಿ ಸಂಸ್ಥೆಯ ಜೊತೆಯಲ್ಲಿಯೇ ಎಲ್ಲಾ ರೀತಿಯ ಪರಿಸ್ಥಿತಿಯಲ್ಲಿ ಸಂಸ್ಥೆಗೆ ಆಸರೆಯಾಗಿ ನಿಂತು ಇಂತಹ ಸುದಿನದವರೆಗೂ ಎಲ್ಲಾ ರೀತಿಯಲ್ಲಿಯೂ ತಮ್ಮ ತನು-ಮನಗಳನ್ನು ಅರ್ಪಿಸಿ ಸಂಸ್ಥೆಯ ಇಂದಿನ ಏಳಿಗೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ಸೇವೆಯನ್ನು ಧನಾತ್ಮಕವಾಗಿ ಪರಿಗಣಿಸಿದ ದೇಸಿ ಸ್ಕಿಲ್ಸ್ ಆಡಳಿತ ಮಂಡಳಿಯು ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ ಎಂಬ ವಿಚಾರವನ್ನು ಹೆಮ್ಮೆಯಿಂದ ತಿಳಿಸಲಿಚ್ಛಿಸುತ್ತದೆ.
ಇವರ ಮೂಲಕ ಸಂಸ್ಥೆಯ ಎಲ್ಲಾ ವಿಚಾರಗಳನ್ನು ಒಪ್ಪಿಕೊಂಡು ಸಂಸ್ಥೆಗೆ ಸಹಕರಿಸಿದ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕುಗಳ ಸಮನ್ವಯಾಧಿಕಾರಿಗಳಿಗೆ ಹಾಗೂ ಸಂಸ್ಥೆಯ ಮುಕುಟಮಣಿಯಾದ “ಗ್ರಾಮೋದ್ಧಾರ ಕೇಂದ್ರ”ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಎಲ್ಲಾ ಗ್ರಾಮ ಪಂಚಾಯಿತಿ ಸಮನ್ವಯಾಧಿಕಾರಿಗಳಿಗೂ ಈ ವಿಚಾರದಲ್ಲಿ ಧನ್ಯವಾದಗಳನ್ನು ಆಡಳಿತ ಮಂಡಳಿಯ ವತಿಯಿಂದ ಅರ್ಪಿಸಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯಾದ್ಯಂತ ಒಳಿದಿರುವ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣಗೊಳಿಸಲು ಸಂಸ್ಥೆಯ ವತಿಯಿಂದ ಎಲ್ಲಾ ರೀತಿಯ ವಿಶೇಷ ಸಹಕಾರಗಳನ್ನು ನೀಡಲಾಗುವುದು ಎಂಬುದನ್ನೂ ಸಂಸ್ಥೆ ಈ ಮೂಲಕ ತಿಳಿಯಪಡಿಸುತ್ತೇವೆ.Leave a Reply