ಭಾರತದ ರಾಜಧಾನಿಯ ಪರಿಚಯ ನಮ್ಮ ದೇಶದ ಪ್ರತಿಯೊಬ್ಬರಿಗೂ ಗೊತ್ತಿರುವಂತದ್ದೇ. ಕರ್ನಾಟಕದ ರಾಜಧಾನಿಯ ಪರಿಚಯ ಎಲ್ಲರಿಗು ತಿಳಿದಿರುವಂತದ್ದೇ. ರಾಜಧಾನಿಗಳ ಸಂಪೂರ್ಣ ವಹಿವಾಟು, ಉದ್ಯಮ, ಇಲ್ಲಿಯ ವೈಭವದ ಜೀವನ, ಇಲ್ಲಿಯ ಸಮಯಕ್ಕೆ ಸರಿಯಾದ ಕಾರ್ಯವೈಖರಿ, ಅಭಿವೃದ್ಧಿಯ ತಂತ್ರಜ್ಞಾನವನ್ನು ಬಹಳ ಅತ್ಯುನ್ನತ್ತ ರೀತಿಯಲ್ಲಿ ಬಳಸುತ್ತಾ ವಿಶ್ವಕ್ಕೆ ಸವಾಲನ್ನು ನೀಡುತ್ತಿರುವ ಹೆಮ್ಮೆಯ ರಾಜಧಾನಿಗಳು ನಮ್ಮದು. ನಮ್ಮ ರಾಜಧಾನಿಗಳ ಸಂಪೂರ್ಣವಾದಂತ ಉಧ್ಯಮ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ವಾತಾವರಣ, ಸವಾಲುಗಳ ಪರಿಸರ ನಮ್ಮ ಗ್ರಾಮ ಪಂಚಾಯಿತಿಯ ಊರುಗಳಿಗೆ ತಲುಪಿದರೆ. ವಿಶ್ವ ಮಟ್ಟದಲ್ಲಿ ದೊಡ್ಡ ಕ್ರಾಂತಿ.

ಗ್ರಾಮೋದ್ಧಾರ ಕೇಂದ್ರದ ಕಾರ್ಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಮೇಲೆ ವಿವರಿಸಿದ ಪೀಠಿಕೆ ನೋಡಿದ್ದಾಯ್ತು. ಹಾಗಿದ್ದರೆ ಗ್ರಾಮೋದ್ಧಾರ ಕೇಂದ್ರದಲ್ಲಿ ಲಭ್ಯವಿರುವ ಸೇವೆ ಮತ್ತು ಉತ್ಪನ್ನಗಳೇನು?

ಮೊದಲನೆಯ ಸೆಕ್ಟರ್: ನಾಗರೀಕ ಸೇವಾ ಪಾವತಿಗಳು (ಬಿಲ್ ಪೇಮೆಂಟ್ಸ್)ಗೆ, ಸಂಪೂರ್ಣವಾದಂತ ಪರಿಹಾರ ಗ್ರಾಮೋದ್ಧಾರ ಕೇಂದ್ರದಲ್ಲಿದೇ. ವಿದ್ಯುತ್ ಬಿಲ್, ಇಂಟರ್ನೆಟ್ ಬಿಲ್, ಗ್ಯಾಸ್ ಬಿಲ್ ಗೆ ಸಾರ್ವಜನಿಕರು ಹಣಪಾವತಿಸುವ ಅವಕಾಶವಿದೆ.

ಎರಡನೆಯ ಸೆಕ್ಟರ್ : ಮೊಬೈಲ್ ಅಂಗಡಿಯಲ್ಲಿ ಲಭ್ಯವಿರುವ ಡೇಟಾ ಕಾರ್ಡ್ ರಿಚಾರ್ಜ್, ಟಿ.ವಿ.ಗಳಿಗೆ ಅಗತ್ಯವಿರುವ ಡಿ.ಟಿ.ಎಚ್ ರಿಚಾರ್ಜ್, ಪ್ರಿ ಪೇಯ್ಡ್ – ಪೋಸ್ಟ್ ಪೇಯ್ಡ್ ಮೊಬೈಲ್ ರಿಚಾರ್ಜ್ ಲಭ್ಯವಿದೆ.

ಮೂರನೆಯ ಸೆಕ್ಟರ್ : ಭಾರತದತ್ಯಂತ ಯಾವುದೇ ಬ್ಯಾಂಕ್ ಗಳ ಖಾತೆಗದರು ಹಣ ವರ್ಗಾವಣೆಯ ಅವಕಾಶ ಇಲ್ಲಿದೇ. ನಮ್ಮ ಭಾರತ ಸರ್ಕಾರ ಹೇಳಿದ ರೀತಿ ಅಂದರೇ ನಮ್ಮ ಆಧಾರ್ ನ ಅಕೌಂಟ್ ಗೆ ಲಿಂಕ್ ಮಾಡಿಸಿದ್ದಾರೆ. ನಮ್ಮ ಭಾರತ ದೇಶದ ಯಾವ ಬ್ಯಾಂಕಿನ ಹಣವನ್ನಾದರೂ ನೀವು ಇಲ್ಲಿ ಬಯೋ ಮೆಟ್ರಿಕ್ ಅಥೆಂಟಿಕೇಶನ್ ಯಿಂದ ಊರಿನ ಶ್ರೀ ಸಾಮಾನ್ಯರಿಗೆ ಹಣವನ್ನು ಇಲ್ಲಿ ತೆಗೆದುಕೊಡ ಬಹುದಾದ ಅವಕಾಶ ಇಲ್ಲಿದೇ.

ನಾಲ್ಕನೆಯ ಸೆಕ್ಟರ್ : ಇಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ವಿಮೆಯನ್ನು ಮಾಡಿಕೊಡ ಬಹುದಾಗಿದೆ.
ಹದಿನೇಳು ಪ್ರಖ್ಯಾತ ಸಂಸ್ಥೆಗಳಾದ ಐ.ಸಿ.ಐ.ಸಿ.ಐ ಪ್ರುಡೆನ್ಷಿಯಲ್, ಕೋಟಕ್ ಲೈಫ್, ರಾಯಲ್ ಸುಂದರಂ, ಭಾರತೀ ಎಕ್ಸಾ, ಮ್ಯಾಕ್ಸ್ ಲೈಫ್, ಎಚ್.ಡಿ.ಎಫ್.ಸಿ ಎರ್ಗೋ, ರಿಲಯನ್ಸ್, ಟಾಟಾ ಎ.ಐ.ಜಿ ಮುಂತಾದ ಸಂಸ್ಥೆಗಳ ವಿಮೆಯ ಅವಕಾಶ ಇಲ್ಲಿದೇ.

ಐದನೆಯ ಸೆಕ್ಟರ್ : ಹೊಸ ಪ್ಯಾನ್ ಕಾರ್ಡ್ ನೋಂದಣಿ, ಹಿಂದಿನ ಪ್ಯಾನ್ ಕಾರ್ಡ್ ತಿದ್ದಿಪಡಿ, ಕಳೆದುಹೋದ ಪ್ಯಾನ್ ಕಾರ್ಡ್ ಗಳನ್ನೂ ನೀವು ಕೇಂದ್ರದಲ್ಲೇ ಮಾಡಿಕೊಡ ಬಹುದಾಗಿದೆ. ಮೇಲೆ ಹೆಸರಿಸಿರುವ ಸೇವೆಗಳು ಗ್ರಾಮೋದ್ಧಾರ ಕೇಂದ್ರಗಳ ಮೂಲ ಸೇವೆಗಳಾಗಿವೆ

ಇದರ ಜೊತೆ ಗ್ರಾಮೋದ್ಧಾರ ಕೇಂದ್ರದಲ್ಲಿ ಸರ್ಕಾರೀ ಸೇವೆಗಳನ್ನು ಮಾಡಬಹುದಾ?
ಸರ್ಕಾರಿ ಸೇವೆಗಳ ವಿಚಾರ ಅಂದರೇ ಪಹಣಿ ಪತ್ರ, ಇನ್ಕಮ್ ಅಂಡ್ ಕಾಸ್ಟ ಸರ್ಟಿಫಿಕೇಟ್ ಇನ್ನೂ ಹಲವು ಬಗೆಯ ಪ್ರಮಾಣ ಪತ್ರವನ್ನು ಮಾಡಬಹುದಾಗಿದೆ. ಇದನ್ನ ಗ್ರಾಮೋದ್ಧಾರ ಕೇಂದ್ರದ ವಿಶೇಷ ಲಾಗಿನ್ ಐ.ಡಿ.ಯಿಂದ ಮಾಡುವಂತ್ತದ್ದೇನಲ್ಲ ಸಾರ್ವಜನಿಕರು ಈಗಾಗಲೇ ಉಪಯೋಗಿಸುತ್ತಿರುವ ಜನರಲ್ ಲಾಗಿನ್ ಐ.ಡಿ.ಯನ್ನೇ ನಾವು ಕೂಡ ನಿಮಗೆ ನೀಡುವಂತದ್ದು. ಉದಾಹರಣೆ : http://landrecords.karnataka.gov.in/ ನಲ್ಲಿ ಪಹಣಿ ಪತ್ರದ ವ್ಯವಸ್ಥೆಯಿದೆ ಸೇವಾ ಸಿಂಧೂ ಅಥವಾ ನಾಡ ಕಚೇರಿಯ ವೆಬ್ಸೈಟ್ ಉಪಯೋಗಿಸಿ ದೃಡೀಕರಣ ಪತ್ರಗಳನ್ನು ಮಾಡಬಹುದಾಗಿದೆ.

ಲೀಡ್ ಜೆನರೇಷನ್ ಭಾಗದಲ್ಲಿ : ಐ.ಟಿ.ರಿಟರ್ನ್ಸ್, ಜಿ.ಎಸ್.ಟಿ ರೆಜಿಸ್ಟ್ರೇಷನ್ಸ್, ಎಂ.ಎಸ್.ಎಂ.ಇ ರಿಜಿಸ್ಟ್ರೇಷನ್, ಕಂಪನಿ ರಿಜಿಸ್ಟ್ರೇಷನ್, ಡಿಜಿಟಲ್ ಸಿಗ್ನೇಚರ್ ಮಾಡಿಕೊಡ ಬಹುದಾದ ಅವಕಾಶವಿದೆ, ನೋಂದಾಯಿಸಲು ಸಮಯವು ಕೂಡ ಇದಕ್ಕೆ ತೆಗೆದುಕೊಳ್ಳುತ್ತದೆ. ಸಂಸ್ಥೆಯ ರಿಜಿಸ್ಟ್ರೇಷನ್ ವಿಭಾಗದೊಂದಿಗೆ ವಿಚಾರವನ್ನು ತೆಗೆದುಕೊಂಡು ಸಂಸ್ಥೆಯ ರಿಜಿಸ್ಟ್ರೇಷನ್ ವಿಭಾಗದ ಸಹಭಾಗಿತ್ವದೊಂದಿಗೆ ಅಗತ್ಯವಿರುವ ವ್ಯಕ್ತಿಗಳಿಗೆ ಇ ಸೇವೆಗಳನ್ನು ಮಾಡಿಕೊಡಬಹುದಾಗಿದೆ.

ಇನ್ನೂ ಗ್ರಾಮೋದ್ಧಾರ ಕೇಂದ್ರದಲ್ಲಿ ಉತ್ಪನ್ನಗಳು ಏನೇನು ಲಭ್ಯವಿದೆ?
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರಿಗೇ ಅಗತ್ಯವಿರುವ ಉತ್ಪನ್ನಗಳು, ರಾಷ್ಟ್ರ ರಾಜಧಾನಿ, ರಾಜ್ಯ ರಾಜಧಾನಿಯಲ್ಲಿ ಲಭ್ಯವಿರುವ ಮೂಲ ಉತ್ಪನ್ನಗಳು ಗ್ರಾಮೋದ್ಧಾರ ಕೇಂದ್ರದಲ್ಲಿ ನೀಡಲಾಗತ್ತಿದೆ.

ಕೇಂದ್ರದಲ್ಲಿ ಲಭ್ಯವಿರುವ ಕೆಲವು ಉತ್ಪನ್ನಗಳನ್ನು ಇಲ್ಲಿ ವಿವರಿಸಲಗಿದೆ :

೧. ಸ್ಟೇಷನರಿ – ವಿದ್ಯಾಭ್ಯಾಸದ ಉತ್ತ್ಪನ್ನಗಳು
ರೋರಿಟೊ, ರೆನೊಲ್ಡ್ಸ್, ಅಪ್ಸರಾ, ನಟರಾಜ, ಸೆಲ್ಲೋ, ವಿಕ್ಟರಿ ಸಂಸ್ಥೆಗಳ ಉತ್ಪನ್ನಗಳನ್ನು. ಗ್ರಾಮೋದ್ಧಾರ ಕೇಂದ್ರದ ಅಧಿಕಾರಿಗಳು ಈಗಾಗಲೇ ಪುಟ್ಟ ಮಕ್ಕಳಿಂದ ಹಿಡಿದು ಕೆಲಸ ಮಾಡುವ ಉದ್ಯೋಗಿಗಳವರೆಗೆ ಅಗತ್ಯ ವಿದ್ಯಾಭ್ಯಾಸದ ವಸ್ತುಗಳನ್ನು ಒದಗಿಸುತ್ತಿದ್ದಾರೆ ಮತ್ತು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಸಿ.ಇ.ಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ಪನ್ನಗಳು ಲಭ್ಯವಿದೆ)

೨. ಪತಂಜಲಿ ಉತ್ಪನ್ನಗಳು ಕೇಂದ್ರದಲ್ಲಿ ಲಭ್ಯವಿದೆ

೩. ಇಲೆಕ್ಟ್ರಾನಿಕ್ ಮತ್ತು ಮೊಬೈಲ್ ಪರಿಕರಗಳು : ಸ್ಟೋರೇಜ್ ಡಿವೈಸ್, ಎಸ್‌ಡಿ ಕಾರ್ಡ್, ಬ್ಲೂಟೂಥ್, ಪವರ್ ಬ್ಯಾಂಕ್, ಹ್ಯಾಂಡ್ ಫ್ರೀ, ಸ್ಪೀಕರ್, ಕೇಬಲ್, ಕಾರ್‌ಚಾರ್ಜರ್, ಸ್ಮಾರ್ಟ್ ಫೋನ್ಸ್ ಮತ್ತು ಕೀಪ್ಯಾಡ್ ಫೋನ್ಸ್ ಗಳು, ವಾಟರ್ ಪ್ಯೂರಿಫೈರ್, ಮೋಟಾರ್ ಆನ್ ವಸ್ತುಗಳು ಈಗಾಗಲೇ ಕೇಂದ್ರದಲ್ಲಿ ಲಭ್ಯವಿದೆ.

೪. ಸೋಲಾರ್ ಪ್ರಾಡಕ್ಟ್ಸ್ : ಹೋಂ ಲೈಟಿಂಗ್ ಕಿಟ್, ಎಲ್.ಇ.ಡಿ, ಸೋಲಾರ್ ಟಾರ್ಚ್, ಸೋಲಾರ್ ಸ್ಟ್ರೀಟ್ ಲೈಟ್ 18W, 20W ಇದರ ಜೊತೆಗೆ ಹಲವು ಬಗೆಯ ಸೋಲಾರ್ ಉತ್ಪನ್ನಗಳು ಲಭ್ಯವಿದೆ.

೫. ಎಫ್.ಎಂ.ಸಿ.ಜಿ. ಪ್ರಾಡಕ್ಟ್ಸ್ : ಕಾಫಿ ಪೌಡರ್, ಟೀ ಪೌಡರ್, ಬಾದಾಮಿ, ಆನಸ್ ಹೂ, ಗೋಡಂಬಿ ಮಿಕ್ಸ್, ಚಕ್ಕೆ, ಒಣ ಗೋಡಂಬಿ, ಒಣ ಶುಂಠಿ, ಒಣದ್ರಾಕ್ಷಿ, ಮಾರ್ತಿಮೊಗ್ಗು, ಮೆಣಸು, ಸೋಂಪು, ಗರಂ ಮಸಾಲ, ಗುಲಾಬ್ ಜಮುನ್ ಮಿಕ್ಸ್, ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಲೆಮನ್ ರೈಸ್ ಪುಡಿ, ಟೊಮೆಟೊ ರೈಸ್ ಪುಡಿ, ಪುಲಿಯೊಗರೆ ಪುಡಿ, ವಂಗೀಬಾತ್ ಪುಡಿ, ಸಾಂಬಾರ್ ಪುಡಿ, ರಾಸಂ ಪುಡಿ, ಬಿಸ್ಬೆಲೆಬಾತ್ ಮಸಾಲ, ಪುಲಾವ್ ಮಸಾಲಾ, ವಿಶೇಷ ಗರಂ ಮಸಾಲ, ಮಸಾಲೆಯುಕ್ತ ಸಾಂಬಾರ್ ಪುಡಿ, ಬಿರಿಯಾನಿ ಮಸಾಲ, ಚಿಕನ್ ಕಬಾಬ್ ಪೌಡರ್, ಮಟನ್ ಮಸಾಲ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಫಿಶ್ ಕಬಾಬ್ ಪೌಡರ್, ಧನಿಯಾ ಪೌಡರ್ ಹೀಗೆ ಹಲವಾರು ರೀತಿಯ ಉತ್ಪನ್ನಗಳು ಕೇಂದ್ರದಲ್ಲಿ ಲಭ್ಯವಿದೆ

೦೬. ಸಿಹಿತಿಂಡಿಗಳು, ಮಿಕ್ಸ್ಚರ್ ಮತ್ತು ಬಿಸ್ಕೆಟ್ಸ್ ಮುಂದಿನ ದಿನದಲ್ಲಿ ಕೇಂದ್ರದಲ್ಲಿ ಲಭ್ಯವಾಗುತ್ತಿದೆ.

೦೭. ಸೌಂದರ್ಯವರ್ಧಕ ಮತ್ತು ದಿನ ಬಳಕೆ ಉತ್ಪನ್ನಗಳು : ಫೇರ್ನೆಸ್ ಕ್ರೀಮ್, ಲೋಷನ್ಸ್, ಹೇಲೋವೆರಾ ಲೋಷನ್, ಫೇರ್ನೆಸ್ ಪೌಡರ್, ಟೂತ್ ಪೇಸ್ಟ್, ಬ್ರಷ್, ಶಂಪೋಸ್, ಸೋಪ್ಸ್, ಡಿಟರ್ಜೆಂಟ್ ಕೇಕ್, ಡಿಟರ್ಜೆಂಟ್ ಪೌಡರ್, ಲಿಕ್ವಿಡ್ ಡಿಟರ್ಜೆಂಟ್ ಲಭ್ಯವಿದೆ.

೮. ಎಲ್.ಇ.ಡಿ.ಬಲ್ಬ್ ಮತ್ತು ಟ್ಯೂಬ್ ಲೈಟ್ :
ಅ. 9w ಎಲ್.ಇ.ಡಿ, 12w ಎಲ್.ಇ.ಡಿ, 15w ಎಲ್.ಇ.ಡಿ ಬಲ್ಬ್
ಆ. 18w ಟ್ಯೂಬ್ ಲೈಟ್
ಇ. ಎಲ್.ಇ.ಡಿ ಫೋಕಸ್ ಲೈಟ್ 10w, 15w 20w
ಈ. 9w ಎಲ್.ಇ.ಡಿ ಡಿ.ಸಿ ಬಲ್ಬ್ಗಳು ಗ್ರಾಮೋದ್ಧಾರ ಕೇಂದ್ರದಲ್ಲಿ ಲಭ್ಯವಿದೆ.

ಗ್ರಾಮೋದ್ಧಾರ ಕೇಂದ್ರದ ಸೇವೆ ಮತ್ತು ಉತ್ಪನ್ನಗಳ ನೋಡಿ ತಿಳಿದದ್ದು ಆಯ್ತು. ನಮ್ಮ ಊರಿನಲ್ಲೂ ಸ್ಥಾಪಿಸಲು ಬಹಳ ಆಸಕ್ತಿ ಇದೆ ಆದರೆ ಇದರ ಲಾಭಂಶವೇನು ಒಮ್ಮೆ ಇದರ ಸಣ್ಣ ಪ್ರಮಾಣದ ಲಾಭ ತೆಗೆದುಕೊಂಡು ಬರೋಣ ಬನ್ನಿ.

೦೧. ಮೊದಲನೆಯದು ಬ್ಯಾಂಕಿಂಗ್ ನ ಉದಾಹರಣೆ ತೆಗೆದುಕೊಳ್ಳುವುದಾದರೇ ಇವತ್ತು ೧೦,೦೦೦/- ದಿಂದ ೨೫,೦೦೦/- ಸಾವಿರದ ವರೆಗೆ ಹಣದ ವಹಿವಾಟು ಆ ದಿನ ಮಾಡಿದರೇ ನಿಮಗೆ ದೊರೆಯುವ ಲಾಭಪ್ರಮಾಣ ೪೩/- ಯಿಂದ ೧೦೦/- ರೂಪಾಯಿಯ ವರೆಗೆ ಲಾಭ ದೊರೆಯುತ್ತದೆ (ವಹಿವಾಟು ಮಾಡಿದ ಹಣದಲ್ಲಿ ನಿಮಗೆ ೦.೪% ಹಣ ಪ್ರತಿವ್ಯವಹಾರದಲ್ಲಿ ಲಭಿಸುತ್ತದೆ, ಈ ಹಣವನ್ನು ಸಾರ್ವಜನಿಕರಿಂದ ತೆಗೆದುಕೊಳ್ಳಲು ಅವಕಾಶವಿದೆ).

೦೨. ಪ್ಯಾನ್ ಕಾರ್ಡ್ ಲಾಭಂಶ ಹೇಳುವುದಾದರೆ, ಹೊಸ ಪ್ಯಾನ್ ಕಾರ್ಡ್ ನೋಂದಣಿ, ತಿದ್ದುಪಡಿ ಅಥವಾ ಕಳೆದುಹೋದ ಪ್ಯಾನ್ ಕಾರ್ಡ್ ಮಾಡಲು ಭಾರತ ಸರ್ಕಾರ ಮತ್ತು ಗ್ರಾಮೋದ್ಧಾರ ಕೇಂದ್ರ ನಿಮಗೆ ಒದಗಿಸುವ ಬೆಲೆ ೧೦೭/- ರೂಪಾಯಿ,
ಅದನ್ನು ನೂರಾ ಹತ್ತಕ್ಕೆ ಸಾರ್ವಜನಿಕರಿಗೆ ಮಾಡಿಕೊಟ್ಟರೆ ನಿಮಗೆ ಲಭಿಸುವ ಲಾಭ ೩/- ರೂಪಾಯೀ
ನೂರಾ ಐವತ್ತು ರೂಪಾಯಿಗಳಿಗೆ ಮಾಡಿಕೊಟ್ಟರೆ ನಿಮಗೆ ಲಭಿಸುವ ಲಾಭ ೪೩/- ರೂಪಾಯೀ
೨೦೦ ರೂಪಾಯಿಗಳಿಗೆ ಮಾಡಿಕೊಟ್ಟರೆ ನಿಮಗೆ ಲಭಿಸುವ ಲಾಭ ೯೩/- ರೂಪಾಯೀ
೨೫೦ ರೂಪಾಯಿಗಳಿಗೆ ಮಾಡಿಕೊಟ್ಟರೆ ನಿಮಗೆ ಲಭಿಸುವ ಲಾಭ ೧೪೩/- ರೂಗಳು ಜನರ ಅಗತ್ಯಕ್ಕೆ ಯಾವುದು ಒಳ್ಳೆಯದು ಅದನ್ನು ನೋಡಿ ಪ್ಯಾನ್ ಕಾರ್ಡ್ ಮಾಡಿಕೊಡಿ ಅದರ ಲಾಭಪ್ರಮಾಣ ನಿಮಗೆ ಲಭ್ಯವಾಗುವುದು.

೦೩. ವಿಮೆಗಳ ಲಾಭಪ್ರಮಾಣ ಒಂದೊಂದು ವಾಹನಗಳಿಗೂ ಒಂದೊಂದು ಮೌಲ್ಯ ನಿರ್ಧಾರವಾಗಿರುತ್ತದೆ.
ಉದಾರಣೆಗೆ ಬಜಾಜ್ ಸಿ.ಟಿ. ಹಂಡ್ರೆಡ್ ವಾಹನದ ವಿಮೆಯ ಮೌಲ್ಯ ೮೦೦/- ರೂಪಾಯೀ ಆಗಿದ್ದರೆ, ಇದರಲ್ಲಿ ಎರಡು ಅಂಶಗಳು ಒಳಪಟ್ಟಿರುತ್ತವೆ.
೦೧. ಮೊದಲನೆಯ ಅಂಶ ಥರ್ಡ್ ಪಾರ್ಟಿ : ಥರ್ಡ್ ಪಾರ್ಟಿಯ ಸಂಪೂರ್ಣ ಹಣ ಭಾರತ ಸರ್ಕಾರಕ್ಕೆ ತಲುಪುತ್ತದೆ ಇದರಲ್ಲಿ ಯಾವುದೇ ಲಾಭಂಶವಿರುವುದಿಲ್ಲ.
೦೨. ಎರಡನೆಯ ಅಂಶ ಕಂಪ್ರೆನ್ಸಿವ್ : ಇದರಲ್ಲಿ ನಿಮಗೆ ಲಾಭಂಶ ಲಭ್ಯವಾಗುವುದು

೮೦೦/- ರೂಪಾಯಿಯ ವಿಮೆಯಲ್ಲಿ ಮುಕ್ಕಾಲು ಭಾಗ ಥರ್ಡ್ ಪಾರ್ಟಿಗೆ ಜಮೆಯಾಗುತ್ತದೆ ಅಂದರೆ ೬೦೦/-ರೂಪಾಯೀ. ಇನ್ನ ಮಿಕ್ಕ ಹಣ ಕಂಪ್ರೆನ್ಸಿವ್ ಆಗಿರುತ್ತದೆ ಅದು ನೇರ ನೀವು ಪಾಲಿಸಿ ಪಂಚ್ ಮಾಡುವ ಸಂಸ್ಥೆಗೆ ತಲುಪುತ್ತದೆ. ಆ ಪಾಲಿಸಿ ಪಂಚ್ ಮಾಡಿದ ವಿಮೆಯ ಸಂಸ್ಥೆ ನಿಮಗೆ ೧೦% ಲಾಭಂಶ ನೀಡುತ್ತದೆ ಅಂದರೆ ೨೦/-ರೂಪಾಯಿ ಇದು ನಿಮಗೆ ಲಾಭಿಸುವ ಲಾಭಾಂಶ. ಕೇಂದ್ರದಲ್ಲಿ ವಿಮೆಯನ್ನು ಮಾಡುವುದು ಮೊಬೈಲ್ ರಿಚಾರ್ಜ್ ಮಾಡಿದಷ್ಟು ಸುಲಭವಾದ ಹಂತ ಇನ್ಸೂರೆನ್ಸ್ ಲಿಂಕ್ ಇಲ್ಲಿದೆ https://www.youtube.com/watch?v=4ZRGIKhfNt8&t=66s ಒಮ್ಮೆ ನೋಡಿ ಬನ್ನಿ

ದ್ವಿಚಕ್ರ ವಾಹನದ ಉದಾರಣೆಯನ್ನು ನೋಡಿದ್ದು ಆಗಿದೆ ಇನ್ನ ಕಾರಿನ ವಿಮೆಯ ಮೌಲ್ಯ ಸಾದಾರಣವಾಗಿ 15,೦೦೦/-ರದಲ್ಲಿ ಇರುತ್ತದೆ ದ್ವಿಚಕ್ರವಾಹನದ ರೀತಿಯಲ್ಲೇ ಇದುಕೂಡಾ ಇರುತ್ತದೆ ಇದರ ಲಾಭಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ನಾಗರೀಕ ಸೇವಾ ಪಾವತಿಗಳು, ಪ್ರಿ ಪೇಯ್ಡ್ – ಪೋಸ್ಟ್ ಪೇಯ್ಡ್ ರಿಚಾರ್ಜ್ ಗಳು, ಡಿ.ಟಿ.ಎಚ್ ರಿಚಾರ್ಜ್, ಲೀಡ್ ಜನರೇಶನ್ ಇನ್ನೂ ಹಲವಾರು ಸೇವೆಗಳ ಲಾಭಂಶ, ಅದರದೆಯಾದ ಒಳ್ಳೆಯ ಲಾಭ ಪ್ರಮಾಣದಲ್ಲಿ ಒಳಗೊಂಡಿದೆ.

ಉತ್ಪನ್ನಗಳ ಲಾಭಪ್ರಮಾಣ ಸತ್ಯವಾಗಿಯೂ ಒಂದು ಕೈ ಹೆಚ್ಚಿಗೆ ಜೀವನಕ್ಕೆ ಬೆಂಬಲವಾಗಿ ನಿಲ್ಲುವಂತ್ತದ್ದೆ. ಪ್ರತಿಯೊಂದು ಉತ್ಪನ್ನಗಳ ಮೇಲು ಕಡಿಮೆಯಂದರು ಕೇಂದ್ರಕ್ಕೆ ದೊರೆಯುವ ಲಾಭ ಪ್ರಮಾಣ ೧೦% ರಿಂದ ೪೦%

ಉತ್ಪನ್ನದ ಒಂದು ಉದಾಹರಣೆ ನೀಡುವುದಾದರೆ ವಿದ್ಯಾಭ್ಯಾಸದ ಉತ್ಪನ್ನವನ್ನು ತೆಗೆದುಕೊಳ್ಳಲು ಪುಟ್ಟ ಮಗು ನಮ್ಮ ಕೇಂದ್ರಕ್ಕೆ ಬಂದು ೧೯೬ ಪುಟದ ಲಾಂಗ್ ನೋಟ್ ಬುಕ್ ತೆಗೆದುಕೊಂಡರೆ ಅದರ ಎಂ.ಆರ್.ಪಿ. ದರ ೪೦/- ರೂಗಳಾಗಿರುತ್ತದೆ. ಕೇಂದ್ರಕ್ಕೆ ಲಭ್ಯವಾಗುವ ದರ ೨೮/- ರೂಪಾಯಿಗಳು ನೀವು ಅದನ್ನ ಮುಗುವಿಗೆ ಹೋಲ್ ಸೇಲ್ ದರದಲ್ಲಿ ನೀಡಿದರೆ ಅಂದರೆ ೩೫/- ರೂಪಾಯಿಗಳಿಗೆ ನೀಡಿದರೆ ಮುಗುವಿಗೆ ಪುಸ್ತಕದ ಮೇಲೆ ೫/- ರೂಪಾಯಿ ಹಣವನ್ನು ಕಡಿಮೆ ಮಾಡಿದ ಹಾಗೆ ಮತ್ತು ೭/- ರೂಪಾಯಿ ನಿಮಗೆ ಲಾಭಂಶ ಲಭಿಸುತ್ತದೆ ಒಂದು ದಿನದಲ್ಲಿ ಹತ್ತು ಪುಸ್ತಕಗಳು ಹೊರಟರೆ ನಿಮಗೆ ದೊರೆಯುವ ಲಾಭ ೭೦/- ರೂಪಾಯಿಗಳು. ಹೀಗೆ ಪ್ರತಿಯೊಂದು ಉತ್ಪನ್ನದಲ್ಲಿ ಲಾಭಂಶ ಲಭಿಸುತ್ತದೆ.

ಇನ್ನೂ ಹೆಚ್ಚಿನ ಲಾಭಂಶದ ಮಾಹಿತಿಗೆ ನಮ್ಮ ಸಂಸ್ಥೆಯ ಇನ್ಕಮ್ ಕ್ಯಾಲ್ಕುಲೇಟರ್ ನಲ್ಲೂ ಒಮ್ಮೆ ಅಗತ್ಯವಾಗಿ ಲೆಕ್ಕ ಮಾಡಿ ನೋಡಿ ಅದರ ಲಿಂಕ್ ಇಲ್ಲಿದೆ : https://desiskills.org/income_calculator/

ಹೀಗೆ ಗ್ರಾಮೋದ್ಧಾರ ಕೇಂದ್ರ ಸೇವೆ ಮತ್ತು ಉತ್ಪನ್ನಗಳನ್ನು ಪ್ರತಿ ಪಂಚಾಯಿತಿಯಲ್ಲಿ ಒದಗಿಸಲು ಮುಂದಾಗುತ್ತಿದೆ. ಆಳವಾದ ಅಧ್ಯಯನವನ್ನು ಹಲವು ಭಾರಿ ಮಾಡಿ ನಂತರ ಸ್ಥಾಪನೆ ಪ್ರಕ್ರಿಯೆಗೆ ಮುಂದಾಗಿ.

ನೊಂದಾಯಿಸಿಕೊಳ್ಳಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ : https://www.youtube.com/watch?v=-iEunN-zbZQ&list=PL1lClLy6eEVivmuCRCansoZ1zl880L_1c

ಧನ್ಯವಾದಗಳು ಪ್ರೇರಣೆಯ ಕರ್ನಾಟಕ